Shibira 2021 - ಶಿಬಿರ 2021

ಶರಣ ಸಂಸ್ಕಾರ ವಿಧ್ಯಾರ್ಥಿ ಶಿಬಿರ 2021

Place - ಉಳವಿ

Date : March 9th and 10

ಸಹಕಾರ :  ಶಿವಪುರದ ಬಸವಧಾಮದ ಪೂಜ್ಯ ಸದ್ಗುರು ಚೆನ್ನಬಸವಾನಂದ ಸ್ವಾಮೀಜಿ ಅವರ ಸಹಕಾರದೊಂದಿಗೆ ಹಾಗೂ ಈಚಲಕರಂಜಿಯ ಸಿದ್ದರಾಮ ಕವಳಿಕಟ್ಟಿ ಮತ್ತು ಇನ್ನಿತರ ಹಲವಾರು ಬಸವ ಭಕ್ತರ ಸಹಾಯ

ಪ್ರಾಯೋಜಕರು: ಬಸವನಗೌಡ ಲಿಂಗಾಯತ



ಸಂಪುರ್ಣ ವಿವರ :  ರಾಮದುರ್ಗ ತಾಲ್ಲೂಕಿನ ರೊಕ್ಕದಕಟ್ಟಿ ಗ್ರಾಮದ ಹಿರಿಯ ಬಸವ ಭಕ್ತರ ಸಹಾಯ ಸಹಕಾರದೊಂದಿಗೆ ರೊಕ್ಕದಕಟ್ಟಿ ಗ್ರಾಮದ 32 ಮಕ್ಕಳಿಗೆ ಉಳವಿಯ ಶಿವಪುರದ ಬಸವಧಾಮ ಆಶ್ರಮದಲ್ಲಿ ದಿನಾಂಕ 09 ಮತ್ತು 10 ರಂದು ಎರಡು ದಿನಗಳ ಕಾಲ ಶರಣ ಸಂಸ್ಕಾರ ವಿದ್ಯಾರ್ಥಿ ಶಿಬಿರ 2021 ಆಯೋಜಿಸಲಾಗಿತ್ತು. ಬಸವನಗೌಡ ಲಿಂಗಾಯತ ಅವರು ಮಕ್ಕಳಿಗೆ ಶರಣರ ಜೀವನ ಸಂದೇಶ ಕಲ್ಯಾಣ ಕ್ರಾಂತಿಯ ಸಂಕ್ಷಿಪ್ತ ಚರಿತ್ರೆ ತಿಳಿಸುವುದರ ಜೊತೆಗೆ ವಚನ ಪಾಠ, ಇಷ್ಟಲಿಂಗ ಪೂಜೆ, ಸಭಾ ನಿರೂಪನೆ ಮಾಡುವುದನ್ನು ಕಲಿಸಿಕೊಟ್ಟರು. 

ಶರಣ ಕ್ಷೇತ್ರಗಳಾದ ಚಿಲುಮೆ ಹೊಂಡ, ಅಕ್ಕನಾಗಮ್ಮನವರ ಗವಿ, ವಿಭೂತಿ ಕಣಜದ ಗವಿ, ಆಕಳ ಗವಿ, ರುದ್ರಾಕ್ಷಿ ಮಂಟಪ ಗವಿ,  ರೇಚಯ್ಯ ಶರಣರ ತಪೋ ಸ್ಥಾನ ಮತ್ತು ಮಹಾಮನೆ ಗವಿಗಳ ದರ್ಶನ ಮಾಡಿಸಲಾಯಿತು. 



ಮಹಾಮನೆ ಹತ್ತಿರ ಜುಳು ಜುಳು ಹರಿಯುವ ನೀರಿನಲ್ಲಿ ಮಕ್ಕಳ ಸ್ನಾನ ಚೆಲ್ಲಾಟ ಅತ್ಯಂತ ಆನಂದ ತರಿಸಿತು. 


ಉಳವಿಯ ಶಿವಪುರದ ಬಸವಧಾಮದ ಪೂಜ್ಯ ಸದ್ಗುರು ಚೆನ್ನಬಸವಾನಂದ ಸ್ವಾಮೀಜಿ ಅವರ ಸಹಕಾರದೊಂದಿಗೆ ಹಾಗೂ ಈಚಲಕರಂಜಿಯ ಸಿದ್ದರಾಮ ಕವಳಿಕಟ್ಟಿ ಮತ್ತು ಇನ್ನಿತರ ಹಲವಾರು ಬಸವ ಭಕ್ತರ ಸಹಾಯ, ಸಹಕಾರದೊಂದಿಗೆ ಶಿಬಿರ ಯಶಸ್ವಿಯಾಗಿ ನೆರವೇರಿತು. 


ಮಕ್ಕಳಿಗೆ ಶರಣರ ಸಂಸ್ಕಾರ ಕೊಡಬೇಕಾದದ್ದು ಇಂದಿನ ಮೊದಲ ಅವಶ್ಯಕತೆ ಆಗಿದ್ದು. ಆ ನಿಟ್ಟಿನಲ್ಲಿ ಶರಣ ಸಂಸ್ಕಾರ ವಿಧ್ಯಾರ್ಥಿ ಶಿಬಿರಗಳು ಹೆಚ್ಚು ಹೆಚ್ಚು ನಡೆಯುವಂತಾಗಲಿ ಎಂದು ಶಿಬಿರ ಆಯೋಜಕ ಹಾಗೂ ಸಂಚಾಲಕ ಬಸವನಗೌಡ ಲಿಂಗಾಯತ ಅವರ ಕಳಕಳಿಯ ನುಡಿಗಳು. 

(ತಮ್ಮ ಗ್ರಾಮದ ಮಕ್ಕಳಿಗೆ ಶರಣ ಸಂಸ್ಕಾರ ವಿಧ್ಯಾರ್ಥಿ ಶಿಬಿರ ನಡೆಸಿಕೊಡಲಾಗುವುದು ಇಚ್ಚಿಸುವವರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9591318100 ಮೆಸೆಜ್ ಫಾರ್ವರ್ಡ್ ಮಾಡಿ ) 














*ಶರಣು ಶರಣಾರ್ಥಿಗಳು*

Comments

  1. ಶರಣು ಶರಣಾರ್ಥಿಗಳು 🙏🏼

    ReplyDelete

Post a Comment