Rastriya Basava Dala Bidar
Date : 28-Jan-2021
ಬೀದರ್ ನಗರದ ಬಸವ ಮಂಟಪದಲ್ಲಿ ಸಿದ್ದರಾಮೇಶ್ವರ ಪೌಣಿ೯ಮೆ ತಿಂಗಳ ಹುಣ್ಣಿಮೆ ಕಾರ್ಯಕ್ರಮವನ್ನು ರಾಷ್ಟ್ರೀಯ ಬಸವ ದಳ ಜಿಲ್ಲಾ ಲಿಂಗಾಯತ ಸಮಾಜ ಹಾಗೂ ಕ್ರಾಂ.ಗಂ.ಅ.ಮ.ಗಣ ಬೀದರ ಇವರ ಸಹಯೋಗದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಪೂಜ್ಯ ಶ್ರೀ ಸದ್ಗುರು ಸತ್ಯಾದೇವಿ ಮಾತಾಜಿಯವರು ವಹಿಸಿ ಆಶೀರ್ವಚನ ನೀಡಿದರು, ಧರ್ಮ ಗುರುವಿನ ಪೂಜೆ ಹಾಗು ದಾಸೋಹ ಶರಣೆ ಸುನಿತ ಶರಣ ಗಣಪತಿ ಬಿರಾದಾರ ದಂಪತಿಗಳು ನೆರವೇರಿಸಿದರು,ಧ್ವಜಾರೋಹಣ ಶರಣ ಬಸವರಾಜ ಚಿಮಟೆ ಮುಸಾಪೇಟ ರಾ ಬ ದ ಹೈದರಾಬಾದ ಇವರಿಂದ, ಉದ್ಘಾಟನೆ ಕ್ರಾಂ.ಗಂ.ಅ.ಮ.ಗಣ ಬೀದರ ಇವರಿಂದ, ಪ್ರಾಸ್ತಾವಿಕ ನುಡಿ ಶರಣೆ ಅಕ್ಕಮಹಾದೇವಿಸ್ವಾಮಿ ನುಡಿದರು,ಈ ಕಾರ್ಯಕ್ರಮದ ನಿರೂಪಣೆ ಶರಣ ಸಿದ್ದವೀರ ಸಂಗಮದ, ಸ್ವಾಗತ ಕಲ್ಪನಾ ಸಾವಲೆ, ಹಾಗು ಶರಣು ಸಮರ್ಪಣೆ ಶರಣ ಶಿವಕುಮಾರ ನಾವದಗಿ, ಈ ಮೂವರು ನಡೆಸಿಕೊಟ್ಟರು, ಕೊನೆಯದಾಗಿ ಎಲ್ಲಾ ಶರಣ ಬಂಧುಗಳು ಧರ್ಮ ಗುರುವಿನ ಮಂಗಲದೊಂದಿಗೆ ಈ ಕಾರ್ಯಕ್ರಮವನ್ನು ಸಮಾರೋಪ ಮಾಡಲಾಯಿತು.






Comments
Post a Comment