ಬಸವ ಜ್ಯೋತಿ ಕಾರ್ಯಕ್ರಮ Basava Jyothi

 

Rastriya Basava Dala BIDAR

Date : ಶ್ರಾವಣ ಮಾಸ 2021

ದಿವ್ಯ ಸಾನಿದ್ಯ : ಪೂಜ್ಯ ಶ್ರೀ ಸದ್ಗುರು ಸತ್ಯಾದೇವಿ ಮಾತಾಜಿ

ಶ್ರಾವಣ ಮಾಸದ ನಿಮಿತ್ಯ ಬೀದರ ರಾಷ್ಟ್ರೀಯ ಬಸವ ದಳ ಮನೆ ನೆಗಳಲ್ಲಿ ಬಸವ ಜ್ಯೋತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.










Rastriya Basava Dala Bhalki

ದಿನಾಂಕ : 14/02/2021

Place : ಶರಣೆ ಪ್ರಭಾವತಿ ಶಂಕರೆಪ್ಪಾ ಜಲಾದೆ ರವರ ಮಹಾಮನೆಯಲ್ಲಿ ಜರುಗಿತ್ತು



ಭಾಲ್ಕಿಯಲ್ಲಿ 12ನೇ ಬಸವ ಜ್ಯೋತಿ ಕಾರ್ಯಕ್ರಮ

     ಭಾರತವು ಜಾತ್ಯಾತೀತ ರಾಷ್ಟ್ರವಾಗಿದೆ, ವಿವಿಧತೆಯಲ್ಲಿ ಏಕತೆ ಒಳಗೊಂಡಿದೆ. ನಮಗೆ ಧರ್ಮ ಕೊಟ್ಟ ಗುರುಗಳು ಆಯಾ ಜಾತಿಯ ಜನರಿಗೆ ಸೀಮಿತವಾಗಿ ಬಿಟ್ಟಿದ್ದಾರೆ. ಅದಕ್ಕಾಗಿ ಅವರ ಮೌಲ್ಯಗಳು ನಶಿಸಿ ಹೋಗುತ್ತಿವೆ, ಸರ್ವರಲ್ಲಿ ಸಮಾನತೆ ಧರ್ಮ ಕೊಟ್ಟವರು ವಿಶ್ವಗುರು ಬಸವಣ್ಣನವರು, ಇಂದು ಸಮಾಜದಲ್ಲಿ ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಧರ್ಮದ ಬಗ್ಗೆ ತುಂಬಾ ಗೊಂದಲಗಳುಂಟಾಗಿವೆ, ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಎಲ್ಲರೂ ಗುರು ಬಸವಣ್ಣನವರ ತತ್ತ್ವಗಳು ಮೈಗೂಡಿಸಿಕೊಳ್ಳಬೇಕೆಂದು ಇಂದಿನ ಬಸವಜ್ಯೋತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾಲ್ಕಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಜೆಪ್ಪಾ ಪಾಟೀಲರು ಇಳಿಸಿದರು.

ದಿನಾಂಕ : 14/02/2021 ರಂದು ಭಾಲ್ಕಿಯಲ್ಲಿ ಜರುಗಿದ 12ನೇ ಬಸವಜ್ಯೋತಿ ಕಾರ್ಯಕ್ರಮವು ಶರಣೆ ಪ್ರಭಾವತಿ ಶಂಕರೆಪ್ಪಾ ಜಲಾದೆ ರವರ ಮಹಾಮನೆಯಲ್ಲಿ ಜರುಗಿತ್ತು. ಶರಣ ದಂಪತಿಗಳು ಗುರು ಬಸವಪೂಜೆ ನೇರವೇರಿಸಿದರು. ಶರಣ ರಮೇಶ ಮೈಲೂರಕರ್ ದಂತಿಗಳು ಷಟಸ್ಥಲ ಧ್ವಜಾರೋಹಣ ಮಾಡಿದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಶರಣ ಶೀಖರೇಶ್ವರ ಶೆಟಕಾರ ನಿವೃತ್ತ ಕೃಷಿ ಅಧಿಕಾರಿಗಳು ಮಾತನಾಡುತ್ತಾ ಇಂದು ಮಕ್ಕಳು ವಚನಗಳ ಕುರಿತು ಮಾತನಾಡುವುದನ್ನು ನೋಡಿದರೆ ಬಸವಧರ್ಮ ಉಜ್ವಲವಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲಾ ಎಂದು ತಿಳಿಸಿದರು.

*) ಶರಣ ಬಸವರಾಜ ದಾನಾ BRP ಕ್ಷೇತ್ರ ಸಂಪನ್ಮೂಲ ಕೇಂದ್ರ ಭಾಲ್ಕಿರವರು ಮಾತನಾಡುತ್ತಾ ಗುರು ಬಸವಣ್ಣನವರು ಎಲ್ಲಾ ಧರ್ಮೀಯರಿಗೆ ಪೂಜ್ಯರು, ಇವರ ವಚನಗಳೇ ನಮ್ಮ ಧರ್ಮಗ್ರಂಥ, ಇಂಥ ಪವಿತ್ರ ಬಸವಜ್ಯೋತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ನನ್ನ ಜೀವನ ಧನ್ಯವಾಯಿತೆಂದು ತಿಳಿಸಿದರು.

*) ಶರಣ ಶಿವಕುಮಾರ ಗಾಯಕವಾಡ ಅಧ್ಯಕ್ಷರು NEKRTC ಭಾಲ್ಕಿ ಘಟಕ ರವರು ಮಾತನಾಡುತ್ತಾ ಬಸವಜ್ಯೋತಿ ಕಾರ್ಯಕ್ರಮದ ಉದ್ದೇಶ ಗುರು ಬಸವಣ್ಣನವರು ಕೊಟ್ಟ ವಚನಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು. ಈ ಸಮಾಜದಲ್ಲಿ ಜಾತಿ ವ್ಯವಸ್ಥೆ ಜಿಡ್ಡುಗೊಂಡಾಗ ಬುದ್ಧ ಮತ್ತು ಬಸವಣ್ಣನವರು ಹುಟ್ಟಿ ಬಂದು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು, ಮಹಿಳೆಯರ ಸಮಾನತೆಗಾಗಿ ಮೊಟ್ಟ ಮೊದಲು ಗುರು ಬಸವಣ್ಣನವರು ಹೋರಾಡಿ, ಮಹಿಳಾ ಸ್ವತಂತ್ರತೆ ಕೊಟ್ಟರು, ಅದನ್ನು ಸಾಂವಿಧಾನಿಕವಾಗಿ ಮಾನ್ಯತೆ ಕೊಟ್ಟವರು ಡಾ|| ಬಾಬಾಸಾಹೇಬ್ ಅಂಬೇಡ್ಕರರು ಎಂದು ತಿಳಿಸಿದರು.

*) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣ ರಮೇಶ ಮೈಲೂರಕರ್ CPI ಭಾಲ್ಕಿ ರವರು ಮಾತನಾಡುತ್ತಾ ನಾವು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಮೂರು ಮುಖ್ಯ ಗುಣಗಳಿರಬೇಕು, ಅವು ಆರೋಗ್ಯ, ನಮ್ಮ ಮಾತುಗಳು ಮತ್ತು ಪ್ರಮಾಣಿಕತೆಯಿಂದ ಬಾಳಬೇಕೆಂದು ತಿಳಿಸಿದರು.

ಹಾಗೂ ಈ ತಿಂಗಳ ಫೇಬ್ರವರಿ 15ರಿಂದ ಮಾರ್ಚ 15ರ ವರೆಗೆ ರಸ್ತೆ ಸಪ್ತಾಹವಿದೆ, ವೇಗವಾಗಿ ವಾಹನ ಚಲಾಯಿಸಿ ನಮ್ಮ ಅಮೂಲ್ಯವಾದ ಜೀವನ  ಹಾಳು ಮಾಡಿಕೊಳ್ಳಬೇಡಿ ಎಂದು ತಿಳಿಸಿದರು.

*) ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಬಸವಪ್ರಭು ಸ್ವಾಮೀಜಿ ಬಸವಧರ್ಮ ಪೀಠ ಬಸವಕಲ್ಯಾಣ ರವರು ಇಂದು ನಮ್ಮ ಸಮಾಜದಲ್ಲಿ ಎಲ್ಲಾ ಸ್ವಾಮೀಜಿಗಳು ಅವರವರ ಜಾತಿಗೆ ಸಂಬಂಧಿಸಿದಂತೆ ಮಿಸಲಾತಿಗಾಗಿ ಹೋರಾಡುತ್ತಿರುವುದು ದುರದೃಷ್ಟಕರ್ ಸಂಗತಿ ಎಂದು ಆಶೀರ್ವಚನ ನೀಡುತ್ತಾ ತಿಳಿಸಿದರು.

ಗುರು ಬಸವಣ್ಣನವರು ಕೊಟ್ಟ ಧರ್ಮವು ಒಂದು ಜಾತಿಗೆ ಸೀಮಿತವಾಗದೆ ವ್ಯಾಪಕವಾಗಿ ಬೆಳೆಯಬೇಕು ಅದು ಜಾತಿ, ವರ್ಣ, ವರ್ಗ ವ್ಯವಸ್ಥೆ ಮೀರಿ ಧರ್ಮವು ಬೆಳೆಯಬೇಕು, ಇಂದು ಯುವಕರು ಧರ್ಮದ ಚೌಕಟ್ಟಿನಲ್ಲಿ ಬೆಳೆಯದೆ, ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು ತುಂಬಾ ಶೋಚನೀಯ ಎಂದು ಕಳವಳ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಮಂಜುಳಾ ನಾಗಶೆಟ್ಟಿ ಅಧ್ಯಕ್ಷರು ಗ್ರಾಮ ಪಂ. ಸಿದ್ದೇಶ್ವರ, ಸಂಜುಕುಮಾರ ಧನಶೆಟ್ಟೆ ಬ.ಕಲ್ಯಾಣ, ಸಿದ್ರಾಮಪ್ಪಾ ಹಂಗರಗಿಕರ್ ಇದ್ದರು.

ಹಾಗೂ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಬಿರಾದಾರ, ಉಪನ್ಯಾಸಕ ವಾರದ ಸರ್, ಶಂಕರ ಚೌಕನಪಳ್ಳೆ, ನಿಜಗುಣ ಸೀತಾ, ಸಂಜುಕುಮಾರ ಸಿದ್ದೇಶ್ವರ, ರಾಜಕುಮಾರ ಡೋಣಗಾಪೂರೆ ಹೀಗೆ ನೂರಾರು ಶರಣ ಬಂಧುಗಳು ಭಾಗವಹಿಸಿದ್ದರು.

ಶರಣೆ ಸುಗಲಾದೇವಿ ಮೈಲೂರಕರ್ ರವರು ವಚನ ಗಾಯನ ಮಾಡಿದರು. ಕು|| ಕೀರ್ತಿ ಶಿವರಾಜ, ರೇಖಾ ಬಸವರಾಜ, ಡಾ|| ಬಸವಶ್ರೀ ಸಂಗಮಕರ್ ಮತ್ತು ರೇಣುಕಾ ಧನರಾಜ ರವರು ವಚನ ಚಿಂತನೆ ಮಾಡಿದರು. ಸುಮಾರು ಮಕ್ಕಳು ವಚನ ಗಾಯನ ಮಾಡಿದರು. ಶರಣ ಮಲ್ಲಿಕಾರ್ಜುನ ಡೋಣಗಾಪೂರೆ ಪ್ರಾರ್ಥನೆ ನಡೆಸಿಕೊಟ್ಟರು. ಗುಂಡಪ್ಪಾ ಸಂಗಮಕರ್ ನಿರೂಪಿಸಿದರು, ಶಿವಕುಮಾರ ಪಾರಾ ಸ್ವಾಗತ ಕೋರಿದರು, ಕಾರ್ಯಕ್ರಮದ ದಾಸೋಹಿಗಳಾದ ಶಂಕರೆಪ್ಪಾ ಜಲದೆ ರವರು ಶರಣು ಸಮರ್ಪಿಸಿದರು. ಮಂಗಲದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತ್ತು.

ಶರಣು ಶರಣಾರ್ಥಿ


Comments